searchicon
facebook twitter pinterest googleplus mail reddit

ಸುದೀಪ್ ಅವರು ತನಗೆ ರೋಲ್ ಮಾಡಲ್ ಅಂದ್ರು ರಾಗಿಣಿ ದ್ವಿವೇದಿ!

published time By Liveinstyle published time 15 May, 2018 Share image 0 Shares


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ದ್ವಿವೇದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇಲ್ಲೇ ತಮ್ಮ ಸ್ನೇಹದ ಬಗ್ಗೆ ರಾಗಿಣಿ ಹಾಗೂ ರಕ್ಷಿತಾ ಮನಬಿಚ್ಚಿ ಮಾತನಾಡಿದರು.
   
ರಕ್ಷಿತಾಗೆ ರಾಗಿಣಿ ಫ್ಯಾನ್.! ನೀವು ನಂಬ್ತೀರೋ, ಬಿಡ್ತಿರೋ... ರಕ್ಷಿತಾಗೆ ರಾಗಿಣಿ ದೊಡ್ಡ ಅಭಿಮಾನಿ. ರಕ್ಷಿತಾ ಅವರ 'ಸುಂಟರಗಾಳಿ' ಹಾಡು ನೋಡಿ, ಅವರಿಗೆ ಫ್ಯಾನ್ ಆಗಿದ್ರಂತೆ ರಾಗಿಣಿ. ನಾವಿಬ್ಬರು ಭೇಟಿ ಆಗಿದ್ದು ಒಂದು ಪಾರ್ಟಿಯಲ್ಲಿ. ನಾನು ಪಾರ್ಟಿ ನಡೆಯುತ್ತಿದ್ದ ಜಾಗದ ಒಳಗೆ ಹೋದಾಗ, ಕಾರ್ನರ್ ಟೇಬಲ್ ನಲ್ಲಿ ರಕ್ಷಿತಾ ಕುಳಿತಿದ್ದರು. ಆಗ ನನಗೆ ಯಾರೋ ಬಂದು ರಕ್ಷಿತಾ ಇಲ್ಲಿದ್ದಾರೆ ಅಂತ ಹೇಳಿದರು. ನಾನು ರಕ್ಷಿತಾ ಅವರ ದೊಡ್ಡ ಅಭಿಮಾನಿ. ಅವರ 'ಸುಂಟರಗಾಳಿ' ಹಾಡನ್ನ 15 ಬಾರಿ ನಾನು ನೋಡಿರಬಹುದು. ಆ ಹಾಡಲ್ಲಿ ಅವರ ಡ್ಯಾನ್ಸ್ ನನಗೆ ತುಂಬಾ ಇಷ್ಟ ಆಗಿತ್ತು. ಅವರನ್ನ ಮೀಟ್ ಮಾಡಲೇಬೇಕು ಅಂತ ಅಂದುಕೊಂಡಿದ್ದೆ. ಪಾರ್ಟಿಯಲ್ಲಿ ಅವರನ್ನ ನೋಡಿದಾಗ ಅಕ್ಷರಶಃ ಓಡಿ ಹೋಗಿ ತಬ್ಬಿಕೊಂಡಿದ್ದೇನೆ. ಅಲ್ಲಿಂದ ನಮ್ಮ ಸ್ನೇಹ ಶುರು ಆಯ್ತು. ರಕ್ಷಿತಾಗೆ ಅಭಿಮಾನಿ ಆಗಿದ್ದವಳು ಇಂದು ಸ್ನೇಹಿತೆ ಆಗಿದ್ದೇನೆ'' - ರಾಗಿಣಿ ದ್ವಿವೇದಿ.
 ಒಂದು ದಿನವೂ ಜಗಳ ಆಡಿಲ್ಲ! ''ನಾವಿಬ್ಬರು ಎಲ್ಲೇ ಹೋದರೂ ಜೋರಾಗಿ ಮಾತನಾಡುತ್ತೇವೆ. ಎಲ್ಲರೂ ನಮ್ಮನ್ನೇ ನೋಡುತ್ತಲಿರುತ್ತಾರೆ. ಐದಾರು ವರ್ಷಗಳಲ್ಲಿ ಒಂದು ದಿನ ಕೂಡ ರಾಗಿಣಿ ಜೊತೆಗೆ ಜಗಳ ಆಡಿಲ್ಲ'' - ರಕ್ಷಿತಾ.

Play button
ಕನ್ನಡದ ಬೆಸ್ಟ್ ಜೋಡಿಗಳಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದಾಗಿತ್ತು. ಒಂದು ಕಾಲದಲ್ಲಿ ಈ ಇಬ್ಬರು ಒಟ್ಟಿಗೆ ತೆರೆ ಮೇಲೆ ಬಂದರೆ ಮ್ಯಾಜಿಕ್ ಸೃಷ್ಟಿ ಆಗುತಿತ್ತು. ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ 'ಕಲಾಸಿಪಾಳ್ಯ', 'ಅಯ್ಯ', 'ಮಂಡ್ಯ', 'ಸುಂಟರಗಾಳಿ' ಸಿನಿಮಾದಲ್ಲಿ ನಟಿಸಿದ್ದರು. ಈ ಎಲ್ಲ ಸಿನಿಮಾಗಳು ಹಿಟ್ ಆಗಿತ್ತು.
ರಕ್ಷಿತಾ ಸದ್ಯ ನಿರ್ಮಾಪಕಿಯಾಗಿ ಬಿಜಿ ಇದ್ದಾರೆ. ಅಲ್ಲದೆ ಅವರು ತೆರೆ ಮೇಲೆ ಬಂದು ಅನೇಕ ವರ್ಷಗಳೆ ಉರುಳಿವೆ. ಆದರೆ ಈಗ ಮತ್ತೆ ದರ್ಶನ್ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಇಷ್ಟ ರಕ್ಷಿತಾಗೆ ಇದೆಯಂತೆ. ಈ ವಿಷಯ ತಿಳಿದಿದ್ದು, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ. 

ಕಾರ್ಯಕ್ರಮದಲ್ಲಿ ಶಿವಣ್ಣ ''ಈಗಿನ ಹೀರೋಗಳಲ್ಲಿ ನೀವು ಯಾರ ಜೊತೆಗೆ ಮತ್ತೆ ನಟನೆ ಮಾಡಲು ಇಷ್ಟ ಪಡುತ್ತೀರಾ ?'' ಎಂದು ಪ್ರಶ್ನೆ ಕೇಳಿದರು. ಆಗ ರಕ್ಷಿತಾ ''ನನಗೆ ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ಇದೆ'' ಎಂದರು. ಆಗ ಶಿವಣ್ಣ ಯಾಕೆ ನಮ್ಮ ಜೊತೆಗೆ ನಟಿಸಲು ಇಷ್ಟ ಇಲ್ವಾ ಎಂದು ತಮಾಷೆ ಮಾಡಿದರು.
ನಂ 1 ಯಾರಿ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ರಾಗಿಣಿ ದ್ವಿವೇದಿ ಮತ್ತು ರಕ್ಷಿತಾ ಬಂದಿದ್ದರು. ಈ ವೇಳೆ ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಶಿವಣ್ಣ ''ಸುದೀಪ್, ಯಶ್, ಲೂಸ್ ಮಾದ ಯೋಗಿ ಈ ಮೂವರಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಾ..? ಯಾರ ಜೊತೆ ಡೇಟಿಂಗ್ ಮಾಡುತ್ತೀರಾ ಮತ್ತು ಯಾರನ್ನು ಕೊಲೆ ಮಾಡುತ್ತೀರಾ? ಅಂತ ಪ್ರಶ್ನೆ ಕೇಳಿದರು. ಸುದೀಪ್ ಜೊತೆ ಮದುವೆ ಶಿವರಾಜ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ''ನಾನು ಸುದೀಪ್ ಜೊತೆಗೆ ಮದುವೆ ಆಗುತ್ತೇನೆ ಅಂತ ಹೇಳಿದರು. ಅಂದಹಾಗೆ, ರಾಗಿಣಿ ದ್ವಿವೇದಿ ಈ ನಟನ ಹೆಸರನ್ನು ತೆಗೆದುಕೊಂಡಿದ್ದು ಕೇವಲ Rapid ಫೈಯರ್ ಆಟಕಷ್ಟೆ. ಸೀರಿಯಸ್ ಆಗಿ ಅಲ್ಲ. ಯಶ್ ಜೊತೆಗೆ ಡೇಟಿಂಗ್ 'ನೀವು ಯಾರ ಜೊತೆ ಡೇಟಿಂಗ್ ಮತ್ತು ಯಾರನ್ನು ಕೊಲೆ ಮಾಡುತ್ತೀರಾ' ಅಂತ ಶಿವಣ್ಣ ಕೇಳಿದಕ್ಕೆ ರಾಗಿಣಿ ''ನಟ ಯಶ್ ಜೊತೆ ಡೇಟಿಂಗ್ ಮತ್ತು ಲೂಸ್ ಮಾದ ಯೋಗಿ ಅವರನ್ನು ಕೊಲೆ ಮಾಡುತ್ತೇನೆ'' ಅಂತ ಹೇಳಿದರು. ಶಿವಣ್ಣ ಯಾಕೆ ಯೋಗಿ ಕೋಲೆ ಮಾಡುತ್ತಿರಾ ಎಂದು ತಮಾಷೆಗೆ ಕಾಲು ಎಳೆದರು.
ನಟ ಸುದೀಪ್ ಅಭಿನಯವನ್ನು ಬರೀ ಕನ್ನಡದ ಮಂದಿ ಮಾತ್ರವಲ್ಲ ಪರಭಾಷೆಯವರು ಸಹ ಕೊಂಡಾಡಿದ್ದಾರೆ. ಅದೇ ಕಾರಣದಿಂದ ಕನ್ನಡದ ಜೊತೆಗೆ ಸುದೀಪ್ ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಸುದೀಪ್ ಆಕ್ಟಿಂಗ್ ನಲ್ಲಿ ಅನೇಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಈಗ ಕನ್ನಡ ಒಬ್ಬ ನಟಿ ಕೂಡ ಅದನ್ನೇ ಹೇಳಿದ್ದಾರೆ. ಶಿವರಾಜ್ ಕುಮಾರ್ ''ನಿಮಗೆ ಆಕ್ಟಿಂಗ್ ನಲ್ಲಿ ರೋಲ್ ಮಾಡೆಲ್ ಯಾರು? ಎಂದು ರಾಗಿಣಿಗೆ ಹೇಳಿದರು. ಆಗ ರಾಗಿಣಿ ಸುದೀಪ್ ಹೆಸರು ತೆಗೆದುಕೊಂಡರು. ಜೊತೆಗೆ ಸುದೀಪ್ ಒಬ್ಬ ಅದ್ಬುತ ನಟ ಎಂದು ಹೇಳಿದರು. ಉಳಿದಂತೆ ಗ್ಲಾಮರ್ ಮತ್ತು ಫಿಗರ್ ನಲ್ಲಿ ರಾಗಿಣಿಗೆ ರಕ್ಷಿತಾ ಅವರೇ ರೋಲ್ ಮಾಡಲ್ ಅಂತೆ.
ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ (ಸತ್ಯ ಅಥವಾ ಧೈರ್ಯ) ನಲ್ಲಿ ಸತ್ಯವನ್ನ ಹೇಳಲು ರಕ್ಷಿತಾ ಆಯ್ಕೆ ಮಾಡಿಕೊಂಡರು. ಆಗ ಶಿವಣ್ಣ ಕೇಳಿದ ಪ್ರಶ್ನೆ...

   
''ಹೀರೋಯಿನ್ ಆಗಿ ಮತ್ತೆ ನೀವು ವೃತ್ತಿ ಶುರು ಮಾಡಿದರೆ, ಈಗಿನ ಯಾವ ಹೀರೋ ಜೊತೆ ಆಕ್ಟ್ ಮಾಡಲು ಇಷ್ಟ ಪಡ್ತೀರಾ?'' ಎಂದು ರಕ್ಷಿತಾಗೆ ಶಿವಣ್ಣ ಪ್ರಶ್ನಿಸಿದರು. ಅದಕ್ಕೆ, ''ನಾನು ಆಕ್ಟ್ ಮಾಡಬೇಕು ಅಂತ ಮತ್ತೆ ನನಗೆ ಯಾವಾಗಾದರೂ ಅನಿಸಿದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ದರ್ಶನ್ ಜೊತೆಗೆ ಆಕ್ಟ್ ಮಾಡಲು ಇಷ್ಟ ಪಡುತ್ತೇನೆ'' ಎಂದರು ರಕ್ಷಿತಾ.

ರಕ್ಷಿತಾ ಕೊಟ್ಟ ಉತ್ತರ ಕೇಳಿ ಶಿವಣ್ಣನಿಗೆ ಖುಷಿ ಆಯ್ತು. ''ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ'' ಅಂತಲೂ ಶಿವಣ್ಣ ಹೇಳಿದರು. ಹೀಗಿರುವಾಗಲೇ, ಶಿವಣ್ಣ ಮತ್ತೊಂದು ಪ್ರಶ್ನೆ ಕೇಳಿದರು.
ದರ್ಶನ್ ಜೊತೆ ಆಕ್ಟ್ ಮಾಡ್ತೀನಿ ಅಂತ ರಕ್ಷಿತಾ ಹೇಳಿದ್ಮೇಲೆ, ''ಯಾಕೆ ನಮ್ಮ ಜೊತೆ ಆಕ್ಟ್ ಮಾಡೋಕೆ ಇಷ್ಟ ಇಲ್ವಾ?'' ಎಂದು ರಕ್ಷಿತಾಗೆ ಶಿವಣ್ಣ ಕೇಳಿದರು. ಆಗ, ''ನೀವು ನನಗೆ ಫಾದರ್ ಫಿಗರ್'' ಎಂದುಬಿಟ್ಟರು ನಟಿ ರಕ್ಷಿತಾ.
'ಫಾದರ್ ಫಿಗರ್' ಅಂತ ರಕ್ಷಿತಾ ಹೇಳುತ್ತಿದ್ದಂತೆಯೇ, ''ಓ ಮೈ ಗಾಡ್.. ಇದೇನಪ್ಪಾ ಅನ್ಯಾಯ ಇದು'' ಎನ್ನುತ್ತಾ ಶಿವಣ್ಣ ಶಾಕ್ ಆಗ್ಬಿಟ್ರು.
''ಇದು ಅವಮಾನ ನನಗೆ. ಇವತ್ತಿನ ಶೂಟಿಂಗ್ ಕ್ಯಾನ್ಸಲ್ ಮಾಡಿ, ಲೈಟ್ಸ್ ಆಫ್..'' ಅಂತ ಶಿವಣ್ಣ ತಮ್ಮ ಆಸನದಿಂದ ಎದ್ದು ಬಿಟ್ಟರು. ಆಗ, ''ಅಣ್ಣ ಓಕೆ ಅಣ್ಣ, ನೀವು ನನ್ನ ಬಾಯ್ ಫ್ರೆಂಡ್ ಕೂತ್ಕೊಳ್ಳಿ, ಕಾಲಿಗೆ ಬೀಳ್ತೀನಿ'' ಎಂದು ರಕ್ಷಿತಾ ಹೇಳಿದರು. ರಕ್ಷಿತಾ ಇಷ್ಟು ಹೇಳಿದ್ಮೇಲೆ, ಲೈಟ್ಸ್ ಆನ್ ಆಯ್ತು.
''ಫಾದರ್ ಫಗರ್ ಅಂತ ಹೇಗಮ್ಮ ಹೇಳ್ದೆ?'' ಎಂದು ಶಿವಣ್ಣ ಪ್ರಶ್ನಿಸಿದಾಗ, ''ಸ್ಕ್ರೀನ್ ಮೇಲೆ ರೋಮ್ಯಾನ್ಸ್ ಮಾಡಬೇಕು ಅಂದಾಗ ನನಗೆ ಖಂಡಿತ ಆ ಭಾವನೆ ಬರುವುದಿಲ್ಲ'' ಅಂತ ರಕ್ಷಿತಾ ಹೇಳಿದರು. ರಕ್ಷಿತಾ 'ಸತ್ಯ' ಹೇಳಿದ್ದಕ್ಕೆ ಶಿವಣ್ಣ ಖುಷಿ ಪಟ್ಟರು.

   
ಅಷ್ಟಕ್ಕೂ, ರಕ್ಷಿತಾ ಮತ್ತು ಶಿವಣ್ಣ ಮಧ್ಯೆ ಇಷ್ಟೆಲ್ಲ ನಡೆದಿದ್ದು ಕಾಲೆಳೆಯುವ ಸಲುವಾಗಿ. ತಮಾಷೆಗಾಗಿ. ಅಷ್ಟೇ ಹೊರತು ಸೀರಿಯಸ್ ಆಗಿ ಅಲ್ಲ.