searchicon
facebook twitter pinterest googleplus mail reddit

ಕನ್ನಡದ ನಿರ್ದೇಶಕರಿಗೆ ರಮೇಶ್ ಅರವಿಂದ್ ಕಿವಿಮಾತು!

published time By Liveinstyle published time 02 May, 2018 Share image 0 Shares


ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಏಳನೇ ಸಂಚಿಕೆಯಲ್ಲಿ ನಟ ರಮೇಶ್ ಅರವಿಂದ್ ಹಾಗೂ ಪಾರೂಲ್ ಯಾದವ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಕನ್ನಡ ಚಿತ್ರರಂಗದಲ್ಲಿ ಈಗ ಅನೇಕ ಯಂಗ್ ಡೈರೆಕ್ಟರ್ ಗಳು ಹೊಸ ಹೊಸ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ವಿಭಿನ್ನ ರೀತಿಯ ಕಥೆಯನ್ನು ಪ್ರೇಕ್ಷಕರಿಗೆ ತೋರಿಸುತ್ತಿದ್ದಾರೆ. ಆ ರೀತಿ ಇರುವ ಸ್ಯಾಂಡಲ್ ವುಡ್ ಯುವ ನಿರ್ದೇಶಕರಿಗೆ ರಮೇಶ್ ಒಂದು ಸಲಹೆ ನೀಡಿದ್ದಾರೆ. ಶಿವಣ್ಣ ''ಈಗಿನ ಕನ್ನಡದ ನಿರ್ದೇಶಕರಿಗೆ ನೀವು ಕೊಡುವ ಸಲಹೆ ಏನು?'' ಎಂದು ಕೇಳಿದರು. ಆಗ ನಿರ್ದೇಶಕರಾದ ರಿಷಬ್ ಶೆಟ್ಟಿ, ಪವನ್ ಒಡೆಯರ್, ಸಿಂಪಲ್ ಸುನಿ ಮತ್ತು ನರ್ತನ್ ಅವರಿಗೆ ರಮೇಶ್ ಒಂದೊಂದು ಸಲಹೆ ನೀಡಿದ್ದಾರೆ.

ರಿಷಬ್ ಶೆಟ್ಟಿ - ''ಅದಷ್ಟು ಬೇಗ ಇನ್ನೊಂದು ಸಿನಿಮಾ ಮಾಡಿ. ಹಿಂದಿನ ಯಶಸ್ಸಿನ ಭಾರವನ್ನು ನಿಮ್ಮ ಹೆಗಲ ಮೇಲೆ ತುಂಬ ಇಟ್ಟುಕೊಳ್ಳಬೇಡಿ. ಹಳೆ ಸಿನಿಮಾ ಆಯ್ತು.. ಈಗ ಮುಂದೆ ನಡೆಯಿರಿ. ''

ಪವನ್ ಒಡೆಯರ್ - ''ಅವರು ಐದು ಸಿನಿಮಾ, ಹತ್ತು ಸಿನಿಮಾ ಒಟ್ಟಿಗೆ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ನನಗೆ ಹೇಗೆ ಇವರು ಅದನ್ನು ನಿಭಾಯಿಸುತ್ತಾರೆ ಅಂತ ಅನಿಸಿತು. ಆ ಸಮಯಕ್ಕೆ ಎಷ್ಟು ಸಿನಿಮಾ ಮಾಡಬೇಕು ಅಷ್ಟೆ ಮಾಡಬೇಕು.''

 

ಸಿಂಪಲ್ ಸುನಿ - ''ಇದೇ ರೀತಿ ಸಿಂಪಲ್ ಸಿನಿಮಾಗಳನ್ನು ಮಾಡುತ್ತಿರಿ ಗೆಲ್ಲುತ್ತಿರುತ್ತಿರ.'' ನರ್ತನ್ - ''ನರ್ತನ್ ಈಗ ತಾನೇ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ ನಾನು ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಅಷ್ಟೆ.'' 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಕನ್ನಡದ ನಟಿಯರ ಬಗ್ಗೆಯೂ ಮಾತನಾಡಿದ್ದಾರೆ. ''ಕನ್ನಡದ ಈ ನಟಿಯರು ಸಿನಿಮಾರಂಗ ಬಿಟ್ಟು ಬೇರೆ ಏನು ಮಾಡಬಹುದು?'' ಎಂದು ಶಿವರಾಜ್ ಕುಮಾರ್ ಪ್ರಶ್ನೆ ಕೇಳಿದರು. ಆಗ ರಮೇಶ್ ರಾಧಿಕಾ ಪಂಡಿತ್ - ಬಹಳ ಒಳ್ಳೆಯ ಹೋಮ್ ಮೇಕರ್ ಆಗುತ್ತಾರೆ ಅನಿಸುತ್ತದೆ.

Play button

ರಕ್ಷಿತಾ - ಒಂದು ಅದ್ಬುತವಾದ ಡ್ಯಾನ್ಸ್ ಸ್ಕೂಲ್ ಮಾಡಬಹುದು. ಅವರಿಗೆ ತುಂಬ ಎನರ್ಜಿ ಇದೆ. ರಶ್ಮಿಕಾ ಮಂದಣ್ಣ - ಟೂತ್ ಪೇಸ್ಟ್ ಜಾಹಿರಾತಿಗೆ ಮಾಡಲ್ ಆಗಬೇಕು. ಅವರ ನಗು ತುಂಬ ಚೆನ್ನಾಗಿದೆ. ರಮ್ಯಾ- ಈಗಾಗಲೇ ಅವರು ಸರಿಯಾದ ಜಾಗದಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾ ಮ್ಯಾನೆಜರ್ ಆಗಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಪ್ರೇಮಾ - ಮಾಲ್ ನಲ್ಲಿ ಎಲಿವೇಟರ್ ಆಗಬಹುದು, ಯಾಕಂದ್ರೆ, ಅವರ ಹೈಟ್ ಅಷ್ಟೊಂದು ಇದೆ. ಶಾನ್ವಿ ಶ್ರೀವಾತ್ಸವ - ಮಕ್ಕಳ ಕಾರ್ಟೂನ್ ಸಿನಿಮಾಗೆ ಧ್ವನಿ ಕೊಡಬಹುದು. ಅವರ ವಾಯ್ಸ್ ತುಂಬ ಸ್ವೀಟ್, ಕ್ಯೂಟ್ ಆಗಿ ಇರುತ್ತದೆ.

ಇದರ ಜೊತೆಗೆ ''ಒಂದು ಲೈನ್ನಲ್ಲಿ ಈ ನಟಿಯರನ್ನು ವರ್ಣಿಸಿ'' ಎಂದು ಶಿವಣ್ಣ ಮತ್ತೊಂದು ಪ್ರಶ್ನೆ ಕೇಳಿದರು.  ಆಗ ರಮೇಶ್ ಅನು ಪ್ರಭಾಕರ್-ತುಂಬ ಸ್ವೀಟ್, ಪ್ರೇಮಾ-ತುಂಬ ಟ್ಯಾಲೆಂಟೆಡ್, ಶೃತಿ-ಎಕ್ಸ್ಟ್ರಾರ್ಡಿನರಿ, ಮಾಲಾಶ್ರೀ- ಡೈನಮೆಟ್ ಅವರು ಸ್ಕ್ರೀನ್ ಮೇಲೆ ಬಂದರೆ ಇಡೀ ಪರದೆ ಸಿಡಿಯುತ್ತದೆ. ಖುಷ್ಬು- ಯೂತ್, ಪಾರೂಲ್- ಕಾಂಪಿಟೇಟಿವ್'' ಎಂದು ಈ ನಟಿಯರನ್ನು ಒಂದೇ ಸಾಲಿನಲ್ಲಿ ಬಣ್ಣಿಸಿದರು.

ಸ್ಯಾಂಡಲ್ ವುಡ್ ಕಂಡ ನಾಲ್ಕು ದೊಡ್ಡ ನಟರ ಪುಸ್ತಕಕ್ಕೆ ಅಷ್ಟೆ ಚೆಂದವಾದ ಹೆಸರನ್ನು ರಮೇಶ್ ನೀಡಿದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಬಗ್ಗೆ ಮಾತನಾಡಿದ ಅವರು ''ನಾನು ಒಮ್ಮೆ ಶಂಕರ್ ನಾಗ್ ಅವರಿಗೆ, ಸರ್ ನೀವು ಏನೇನೋ ಕನಸು ಕಾಣುತ್ತಿದ್ದೀರಾ.. ಅಲ್ಲಿಂದ.. ಇಲ್ಲಿಂದ ಲೋನ್ ತೆಗೆದುಕೊಳ್ಳುತ್ತಿದ್ದೀರಾ. ಕೆಲವೊಮ್ಮೆ ಅನಿಸುತ್ತದೆ ನಿಮ್ಮ ಸಾಮರ್ಥ್ಯಕ್ಕಿಂತ ನಿಮ್ಮ ಲೋನ್ ಜಾಸ್ತಿ ಆಗುತ್ತಿದೆ ಅಂತ ಕೇಳಿದೆ. ಆಗ ಅವರು 'ಈ ಕ್ರೆಡಿಟ್, ಡೆಬಿಟ್ ಎಲ್ಲ ಅಕೌಂಟ್ಸ್ ಬುಕ್ ನಲ್ಲಿರುವ ಕಾಲಂ ರಮೇಶ್. ಅವು ನಮ್ಮ ಕನಸುಗಳಿಗೆ ಅಡ್ಡ ಬರಬಾರದು' ಎಂದರು . ಅದಕ್ಕೆ ಶಂಕರ್ ನಾಗ್ ಅವರ ಜೀವನ ಚರಿತ್ರೆಗೆ 'ಡೀಮ್ಸ್ ಬಿಯಾಂಡ್ ಕ್ರೆಡಿಟ್ ಡಿಬಿಟ್' ಅಥವಾ 'ಆಕಾಶದ ಆಚೆಗೆ ಕನಸು' ಅಂತ ಬರೆಯಬೇಕು.'' ಎಂದು ಶಂಕರ್ ನಾಗ್ ಅವರ ಕನಸಿನ ಬಗ್ಗೆ ರಮೇಶ್ ಮಾತನಾಡಿದರು.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬಗ್ಗೆ ರಮೇಶ್ ಅರವಿಂದ್ ಒಂದೆರಡು ಮಾತುಗಳನ್ನಾಡಿದ್ದಾರೆ.

''ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ನಾನು ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇರಲಿಲ್ಲ'' ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ.

   
 ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ ನಲ್ಲಿ ರಮೇಶ್ ಅರವಿಂದ್ ಸತ್ಯವನ್ನ ಹೇಳುವ ಆಯ್ಕೆ ಮಾಡಿಕೊಂಡರು. ಆಗ ಶಿವಣ್ಣ, ''ಯಾವುದಾದರೂ ಸಿನಿಮಾಗೆ ಹೋಗಿ, ಅರ್ಧದಲ್ಲೇ ಎದ್ದು ಬಂದಿರೋದು ಇದ್ಯಾ.?'' ಅಂತ ಪ್ರಶ್ನೆ ಮಾಡಿದರು.

''ಎಷ್ಟೋ ಸಿನಿಮಾಗಳಿಗೆ ಹೋಗಿ ಅರ್ಧದಲ್ಲೇ ಎದ್ದು ಬಂದಿರೋದು ಇದೆ. ಅದರಲ್ಲೂ ಅಮಿತಾಬ್ ಬಚ್ಚನ್ ಅಭಿನಯದ 'ಝೂಮ್ ಬರಾಬರ್ ಝೂಮ್' ಚಿತ್ರಕ್ಕೆ ಹೋಗಿ ಅರ್ಧಕ್ಕೆ ಎದ್ದು ಬಂದೆ'' ಎಂದು ರಮೇಶ್ ಉತ್ತರಿಸಿದರು. ಆಗ ''ಕನ್ನಡದಲ್ಲಿ.?'' ಎಂದು ಶಿವಣ್ಣ ಮರು ಪ್ರಶ್ನಿಸಿದರು. ಆಗ ರಮೇಶ್ ಕೊಟ್ಟ ಉತ್ತರ....
''ನಾನು 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರ ನೋಡಿದೆ. ಆ ಸಿನಿಮಾದಲ್ಲಿ ತಪ್ಪೇನೂ ಇಲ್ಲ. ಚಿತ್ರ ಚೆನ್ನಾಗಿಲ್ಲ ಅಂತ ಹೇಳ್ತಿಲ್ಲ. ಆದ್ರೆ, ಅವರ ಸ್ಕ್ರಿಪ್ಟ್ ಕೇಳಿದಾಗ ಬಹಳ ಚೆನ್ನಾಗಿತ್ತು. ಆದ್ರೆ ತೆರೆಗೆ ತರುವಾಗ ಅದು ಎಲ್ಲೋ ಮಿಸ್ ಆಗಿದೆ ಅನಿಸ್ತು. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇಲ್ಲ ಅಂತ ಅನಿಸ್ತು'' ಎಂದರು ರಮೇಶ್ ಅರವಿಂದ್.