searchicon
facebook twitter pinterest googleplus mail reddit

ಯಶ್ , ರಕ್ಷಿತ್ ಶೆಟ್ಟಿ , ಪುನೀತ್ ರಾಜ್ ಕುಮಾರ್ ಬಗ್ಗೆ ಶ್ರೀನಾಥ್ ಕೊಟ್ಟ ಸಲಹೆ ಇದು!

published time By Liveinstyle published time 02 May, 2018 Share image 0 Shares

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಶೃತಿ ಹರಿಹರನ್ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕುಮಾರ್ ಕೇಳಿದ ಪ್ರತಿ ಪ್ರಶ್ನೆಗೆ ಪಟ್ ಪಟ್ ಅಂತ ಇಬ್ಬರು ನಟಿಯರು ಉತ್ತರಿಸಿದರು. ಇನ್ನು ಇದೇ ವೇಳೆ ಕನ್ನಡದ ನಟರಿಗೆ ಶ್ರದ್ಧಾ ಒಂದೊಂದು ಸಲಹೆಯನ್ನು ನೀಡಿದರು. ಅಂದಹಾಗೆ, ಶ್ರದ್ಧಾ ಈ ರೀತಿಯಾದ ಸಲಹೆಯನ್ನು ನಟರಿಗೆ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ತುಂಬ ಟ್ಯಾಲೆಂಟೆಡ್ ಎಂದ ಶ್ರದ್ಧಾ ಶ್ರೀನಾಥ್, ಧ್ರುವ ಸರ್ಜಾ - ನಿಮ್ಮ ಫ್ಯಾನ್ಸ್ ಬೇರೆ ನಟ/ನಟಿಯರ ಬಗ್ಗೆ ಏನಾದರೂ ಮಾತನಾಡಿದರೆ, ರೇಗಿದರೆ ನೀವು ಮುಂದೆ ಬಂದು ಹಾಗೆ ಮಾಡಬಾರದು ಅಂತ ಹೇಳಿದರು. ಯಶ್ - ಗಡ್ಡ ಇಲ್ಲದೆ ಒಂದು ಸಿನಿಮಾ ಮಾಡಿ, ನೀನಾಸಂ ಸತೀಶ್ - ನಿಮಗೆ ಒಂದು ವರ್ಗದ ಪ್ರೇಕ್ಷಕರು ಇದ್ದಾರೆ ಅವರಿಗೆ ಗಮನಹರಿಸಿ ಸಿನಿಮಾ ಮಾಡಿ ರಕ್ಷಿತ್ ಶೆಟ್ಟಿ - ಹೆಚ್ಚು ಸಿನಿಮಾವನ್ನು ನಿರ್ದೇಶನ ಮಾಡಿ ಪುನೀತ್ ರಾಜ್ ಕುಮಾರ್ - ಪೃಥ್ವಿ ರೀತಿಯ ಮತ್ತೊಂದು ಸಿನಿಮಾ ಮಾಡಿ ಶಿವರಾಜ್ ಕುಮಾರ್ - ನಮ್ಮ ಜೊತೆಗೆ ಒಂದು ಸಿನಿಮಾ ಮಾಡಿ ಇದರ ಜೊತೆಗೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಹೇಳಿದರು. ಕನ್ನಡದ ನಟರಾದ ''ಧ್ರುವ ಸರ್ಜಾ, ಯಶ್, ರಕ್ಷಿತ್ ಶೆಟ್ಟಿ, ಸತೀಶ್ ನೀನಾಸಂ ಮತ್ತು ಪುನೀತ್ ರಾಜ್ ಕುಮಾರ್ ಇವರ ಟ್ಯಾಲೆಂಟ್ ಪ್ರಕಾರ ರಾಂಕ್ ನೀಡಿ ಎಂದರು.

ಆಗ ಶ್ರದ್ದಾ ಮೊದಲು ರಕ್ಷಿತ್ ಶೆಟ್ಟಿ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಯಶ್, ಪುನೀತ್ ರಾಜ್ ಕುಮಾರ್, ಸತೀಶ್ ನೀನಾಸಂ ಮತ್ತು ಧ್ರುವ ಸರ್ಜಾ ಎಂದು ಉತ್ತರಿಸಿದರು. ಆಕ್ಷನ್ ಪ್ರಿನ್ಸ್ ಧ್ರುವಸರ್ಜಾಗೆ ಶ್ರದ್ಧಾ ಕೊನೆಯ ಸ್ಥಾನ ನೀಡಿದ್ದಾರೆ. ರಮ್ಯಾ ರೀತಿಯ ಒಬ್ಬ ನಟಿ ಇದುವರೆಗೆ ಕನ್ನಡ ಚಿತ್ರರಂಗಕ್ಕೆ ಸಿಕ್ಕಿಲ್ಲ ಎಂಬುದು ಅನೇಕರ ಮಾತಾಗಿದೆ. 10 ವರ್ಷ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದಿದ್ದ ರಮ್ಯಾ ಬಳಿಕ ರಾಜಕೀಯಕ್ಕೆ ಹೋದರು. ಕನ್ನಡದ ಮತ್ತೊಬ್ಬ ನಟಿ ಶ್ರದ್ಧಾ ಶ್ರೀನಾಥ್ ರಮ್ಯಾಗೆ 'ಬಾಸ್' ಎಂಬ ಬಿರುದು ನೀಡಿದ್ದಾರೆ.

Play button

ನಟಿ ಶ್ರದ್ಧಾ ಶ್ರೀನಾಥ್ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಶಿವರಾಜ್ ಕುಮಾರ್ ಒಂದು ಪ್ರಶ್ನೆ ಕೇಳಿದರು. ಈ ಹಿರೋಯಿನ್ ಗಳಿಗೆ ಯಾವ ಬಿರುದು ನೀಡುತ್ತೀರಾ? ಎಂದು ನಾಲ್ಕು ನಟಿಯರ ಹೆಸರನ್ನು ಹೇಳಿದರು. ಆಗ ನಟಿಯರಿಗೆ ಶ್ರದ್ಧಾ ಹೊಸ ಟೈಟಲ್ ಕೊಟ್ಟರು. ರಮ್ಯಾ – ಬಾಸ್ ,ರಕ್ಷಿತಾ – ಸೈರನ್, ರಾಧಿಕಾ ಕುಮಾರಸ್ವಾಮಿ - ವಂಡಲ್ ಫುಲ್ ಡ್ಯಾನ್ಸರ್ ಮಾಲಾಶ್ರೀ - ಪುಲರ್ ಆಫ್ ಆಡಿಯನ್ಸ್.


''ರಮ್ಯಾ ಕನ್ನಡ ಇಂಡಸ್ಟ್ರಿಯ ಬಾಸ್, ರಕ್ಷಿತಾ ಅವರ ಸುಂಟರಗಾಳಿ ಹಾಡು ಕೇಳಿದ್ದೇನೆ.ಅವರು ಸೈರನ್ ಇದ್ದ ಹಾಗೆ, ರಾಧಿಕಾ ಕುಮಾರಸ್ವಾಮಿ ಅವರು ವಂಡಲ್ ಫುಲ್ ಡ್ಯಾನ್ಸರ್ ಮತ್ತು ಮಾಲಾಶ್ರೀ ಒಂದು ಕಾಲದಲ್ಲಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವ ಶಕ್ತಿ ಹೊಂದಿದ್ದ ನಟಿ (ಪುಲರ್ ಆಫ್ ಆಡಿಯನ್ಸ್)'' ಎಂದು ಶ್ರದ್ಧಾ ಹೇಳಿದರು. ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಸಿನಿಮಾದ ನಂತರ ಕಾಲಿವುಡ್ ಸಿನಿಮಾ ಮಾಡಿದರು. ಆ ಸಿನಿಮಾದ ನಂತರ ಇದೀಗ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಟ್ಯಾಲೆಂಟ್ ಮೂಲಕ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಇಂತಹ ನಟಿ ಶ್ರದ್ಧಾ ಶ್ರೀನಾಥ್ ಇದೀಗ ನಟ ರಿಷಿ ಜೊತೆಗೆ ನೈಟ್ ಔಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಒಂದು ಪ್ರಶ್ನೆ ಕೇಳಿದರು. ಡೇಟ್, ಮ್ಯಾರೇಜ್ ಮತ್ತು ನೈಟ್ ಔಟ್ಗೆ ಯಾವ ಕನ್ನಡ ನಟರನ್ನು ಆಯ್ಕೆ ಮಾಡುತ್ತೀರಾ ಎಂದರು. ಆಗ ಶ್ರದ್ಧಾ ನಾನು ರಕ್ಷಿತ್ ಶೆಟ್ಟಿ ಜೊತೆಗೆ ಟೇಟಿಂಗ್, ಸುದೀಪ್ ಸರ್ ಜೊತೆಗೆ ಮ್ಯಾರೇಜ್ ಹಾಗೂ ರಿಷಿ ಜೊತೆಗೆ ನೈಟ್ ಔಟ್ ಹೋಗುತ್ತೇನೆ ಎಂದರು. ಅಂದಹಾಗೆ, ಶ್ರದ್ಧಾ ಶ್ರೀನಾಥ್ ಅವರ 'ಆಪರೇಷ್ ಅಲಮೇಲಮ್ಮ' ಸಿನಿಮಾದಲ್ಲಿ ರಿಷಿ ನಾಯಕನಾಗಿ ನಟಿಸಿದ್ದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ಶ್ರದ್ದಾಗೆ ''ಶಿವಣ್ಣ ಶೃತಿ ಹರಿಹರನ್ ಅವರ ಯಾವ ಸಿನಿಮಾವನ್ನು ನೀವು ಮಾಡಿದ್ದರೆ ಚೆನ್ನಾಗಿ ಇರುತ್ತಿತ್ತು?'' ಎಂದು ಕೇಳಿದರು. ಆಗ ಶ್ರದ್ಧಾ 'ಗೋಧಿ ಬಣ್ಣ ಸಾದಾರಣ ಮೈ ಕಟ್ಟು' ಎಂದು ಹೇಳಿದರು. 'ಗೋಧಿ ಬಣ್ಣ ಸಾದಾರಣ ಮೈ ಕಟ್ಟು' ಸಿನಿಮಾದ ಮೂಲಕ ಶೃತಿ ಒಳ್ಳೆಯ ಹೆಸರು ಮಾಡಿದ್ದರು. ಸೋ, ಆ ಸಿನಿಮಾದ ಪಾತ್ರ ಶ್ರದ್ದಾಗೆ ಕೂಡ ತುಂಬ ಇಷ್ಟ ಆಗಿದೆಯಂತೆ.
ಕನ್ನಡ ಸೇರಿದಂತೆ ಎಲ್ಲ ಚಿತ್ರರಂಗದಲ್ಲಿ ನಟ ಮತ್ತ ನಟಿಯರ ನಡುವೆ ಸಂಭಾವನೆ ತಾರತಮ್ಯ ಇದೆ. ಇದನ್ನು ಬಾಲಿವುಡ್ ನಲ್ಲಿ ಅನೇಕ ನಟಿಯರು ವಿರೋಧಿಸಿದ್ದಾರೆ. ಕನ್ನಡಕ್ಕೆ ಬಂದರೆ ನಟಿ ಅಂದ್ರಿತಾ ರೇ ಹಾಗೂ ರಮ್ಯಾ ಈ ಬಗ್ಗೆ ಮೊದಲು ಧ್ವನಿ ಎತ್ತಿದ್ದರು. ಆದರೆ ಈಗ ಇದಕ್ಕೆ ಶೃತಿ ಹರಿಹರನ್ ಕೂಡ ಸೇರಿದ್ದಾರೆ.

ಕನ್ನಡದ ನಟರಿಗೆ ಮತ್ತು ನಟಿಯರಿಗೆ ನೀಡುವ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಸ್ಟಾರ್ ನಟರಿಗೆ ಕೊಡುವ ಅರ್ಧ ಸಂಭಾವನೆಯನ್ನು ಸಹ ನಟಿಯರಿಗೆ ನೀಡುವುದಿಲ್ಲ. ಆ ಬಗ್ಗೆ ಸದ್ಯ ಶೃತಿ ಹರಿಹರನ್ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ''ನೀವು ಇಂಡಸ್ಟ್ರಿಯಲ್ಲಿ ಇರುವ ಯಾವ ಒಂದು ವಿಷಯವನ್ನು ಬದಲಾಯಿಸುತ್ತೀರಾ ಎಂದರು. ಆಗ ಶೃತಿ ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ
  
''ಸಂಭಾವನೆ ಎನ್ನುವುದು ಕಥೆಯಲ್ಲಿ ಒಂದು ಪಾತ್ರಕ್ಕೆ ಇರುವ ಪ್ರಾಮುಖ್ಯತೆ ಮೇಲೆ ನಿರ್ಧಾರ ಆಗಬೇಕು. ಆ ವಿಚಾರದಲ್ಲಿ ನನಗೆ ಬದಲಾವಣೆ ಆಗಬೇಕು ಎನಿಸುತ್ತದೆ.'' ಎಂದು ಶೃತಿ ಹೇಳಿದರು. ಈ ವೇಳೆ ನಟಿ ಶ್ರದ್ಧಾ ಶ್ರೀನಾಥ್ ಸಹ ಜೊತೆಗಿದ್ದರು. ಶೃತಿ ಹರಿಹರನ್ ಇದುವರೆಗೆ ಮಾಡಿರುವ ಬಹುತೇಕ ಸಿನಿಮಾಗಳಲ್ಲಿ ಅವರ ಪಾತ್ರ ತುಂಬ ಪ್ರಾಮುಖ್ಯತೆ ಇದೆ. ಹೀಗಿರುವಾಗ ಗಂಡು - ಹೆಣ್ಣು, ನಟ - ನಟಿ ಎನ್ನುವುದನ್ನು ಬಿಟ್ಟು ಪಾತ್ರಕ್ಕೆ ಬೆಲೆ ಕೊಟ್ಟು ಸಂಭಾವನೆಯನ್ನು ನಿರ್ಧಾರ ಮಾಡಬೇಕು ಎನ್ನುವುದು ಶೃತಿ ಅಭಿಪ್ರಾಯ.