searchicon
facebook twitter pinterest googleplus mail reddit

ಕಿಸ್ಸಿಂಗ್ ಸೀನ್ ಬಗ್ಗೆ ಮಾತನಾಡಿದ ದಿಗಂತ್!

published time By Liveinstyle published time 18 Apr, 2018 Share image 0 Shares

ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ "ನಂ.1 ಯಾರಿ" ಕಾರ್ಯಕ್ರಮದ ನಾಲ್ಕನೇ ಸಂಚಿಕೆಯಲ್ಲಿ ಭಾಗವಹಿಸಿದ್ದು ದೂದ್ ಪೇಡ ದಿಗಂತ್ ಹಾಗೂ ಲೂಸ್ ಮಾದ ಯೋಗಿ. ಈ ಇಬ್ಬರು ಯುವ ನಟರು ತಮ್ಮ ಸಿನೆಮಾರಂಗದ ಹಾಗೂ ವಯಕ್ತಿಕ ಬದುಕಿನ ಕುರಿತು ಶಿವಣ್ಣ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ರೋಮ್ಯಾಂಟಿಕ್ ಸೀನ್ಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ, ಅದರಲ್ಲೂ ಕಿಸ್ಸಿಂಗ್ ಸೀನ್ ಮಾಡುವಾಗ ಕೆಲವರು ಬೇಕು ಬೇಕು ಅಂತಲೇ ರೀಟೇಕ್ ತೆಗೆದುಕೊಳ್ತಾರಂತೆ! ದಿಗಂತ್ ಕೂಡ ಕಿಸ್ಸಿಂಗ್ ಸೀನ್ ಮಾಡುವಾಗ ಜಾಸ್ತಿ ರೀಟೇಕ್ಸ್ ತೆಗೆದುಕೊಂಡಿದ್ರಾ.?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿಗಂತ್ಗೆ ನೇರವಾಗಿ ಈ ಪ್ರಶ್ನೆಯ ಬಾಣವನ್ನ ಬಿಟ್ಟರು.

Play button
''ಸಿನಿಮಾದಲ್ಲಿ ರೋಮ್ಯಾಂಟಿಕ್ ಸೀನ್ಸ್ ಮಾಡುವಾಗ, ಜಾಸ್ತಿ ರೀಟೇಕ್ಸ್ ತಗೊಂಡಿದ್ದು ಉಂಟಾ.?'' ಎಂದು ಪ್ರಶ್ನೆಯನ್ನ ದಿಗಂತ್ಗೆ ಶಿವಣ್ಣ ಕೇಳಿದರು. ಆಗ, ''ಆ ತರಹ ಇಲ್ಲ. ನನಗೆ ಸ್ವಲ್ಪ ಸಂಕೋಚ ಜಾಸ್ತಿ'' ಎಂದರು ದಿಗಂತ್. ಅದಕ್ಕೆ ''ನಿಜ ಹೇಳಬೇಕು'' ಅಂತ ಯೋಗಿ ಹಾಗೂ ಶಿವಣ್ಣ ಹೇಳಿದ್ಮೇಲೆ, ''ಹಿಂದಿ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇತ್ತು. ಆಗಲೇ ಏಳೆಂಟು ಟೇಕ್ ಆಗಿತ್ತು. ಡೈರೆಕ್ಟರ್ ಬಂದು ಬೇರೆ ಬೇರೆ ಆ್ಯಂಗಲ್ ನಲ್ಲಿ ಇನ್ನೂ ಎರಡು ಟೇಕ್ ಬೇಕು ಅಂತ ಹೇಳಿದರು. ಆಗ ಅದರ ಬಗ್ಗೆ ನನಗೆ ಖುಷಿ ಆಯ್ತು. ನಾನು ಕೇಳಲಿಲ್ಲ ಆದರೆ ದೇವರು ಕೊಟ್ಟ ಗಿಫ್ಟ್ ಅದು'' ಎಂದು ಹಲ್ಲುಬಿಟ್ಟರು ದಿಗಂತ್. ಸ್ಯಾಂಡಲ್ವುಡ್ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ದಿಗಂತ್ ಇದೇ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಸುಂದರ ಹುಡುಗಿಯವಕೊರಳಿಗೆ ಸದ್ಯದಲ್ಲೇ ದಿಗಂತ್ ಮಾಂಗಲ್ಯಧಾರಣೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ 'ಯಾರೀ ಮೀಟರ್' ಚೆಕ್ ಸುತ್ತಿನಲ್ಲಿ ಶಿವಣ್ಣ ''ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕೋಸ್ಕರ, ನೀವು ಕಾಯಲು ಆಗುವುದಿಲ್ಲ, ಕಾಯುವುದಿಲ್ಲ.?'' ಎಂದು ಕೇಳಿದರು. ಅದಕ್ಕೆ ''ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ. ಅದಕ್ಕೋಸ್ಕರ ಕಾಯುತ್ತಿದ್ದೇನೆ'' ಎಂದು ಉತ್ತರಿಸಿದರು ದಿಗಂತ್.

''ಇದೇ ವರ್ಷ ಮದುವೆ ಆಗಲು ಪ್ಲಾನ್ ಮಾಡಿದ್ದೇನೆ'' ಎಂದು ದಿಗಂತ್ ಹೇಳಿದ ಕೂಡಲೆ, ''ಆಂಡಿ ಬಿ ರೆಡಿ. ಮದುವೆ ಊಟಕ್ಕೆ ಕಾಯುತ್ತಿದ್ದೇವೆ. ನಾವು ಖಂಡಿತ ಮದುವೆಗೆ ಬರುತ್ತೇವೆ'' ಎಂದು ಶಿವಣ್ಣ ಹೇಳಿದರು.
ಹಲವು ಸಿನೆಮಾ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಈಗ ಅದೇ ಹಾದಿಯಲ್ಲಿ ಸಾಗಲು ದಿಗಂತ್ ಕೂಡ ಸಜ್ಜಾಗಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ದಿಗಂತ್ ಹೀರೋ. ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ದಿಗಂತ್ಗೆ ಒಂದು ಆಸೆ ಇದೆ. ಅದು ಏನಪ್ಪಾ ಅಂದ್ರೆ, ನಟ ದಿಗಂತ್ ಲೂಸ್ ಮಾದ ಯೋಗಿ ಜೊತೆಗೆ ತೆರೆಹಂಚಿಕೊಳ್ಳಬೇಕಂತೆ.! ಲೂಸ್ ಮಾದ ಯೋಗಿ ಜೊತೆಗೆ ದಿಗಂತ್ ಆಕ್ಟ್ ಮಾಡಬೇಕಂತೆ! ಹೌದು, ದೂದ್ ಪೇಡ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಕುಚ್ಚಿಕ್ಕು ಗೆಳೆಯರು. ಏಳೆಂಟು ವರ್ಷಗಳಿಂದ ಇವರಿಬ್ಬರಿಗೂ ಒಂದೇ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲ ಇದೆ. ಇದನ್ನ ಇಬ್ಬರೂ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು.