searchicon
facebook twitter pinterest googleplus mail reddit

ಮದುವೆ ಆಗದೇ ಇರೋಹುಡುಗರ ಅನುಕೂಲಗಳನ್ನ ತಿಳಿಸಿಕೊಟ್ರು ಧನಂಜಯ್

published time By Liveinstyle published time 11 Apr, 2018 Share image 0 Shares


‘ನಂ. 1 ಯಾರಿ ವಿತ್ ಶಿವಣ್ಣ’ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಹೊಸ ಟಾಕ್ ಶೋ. ಈಗಾಗಲೇ, ಉಪೇಂದ್ರ ಹಾಗೂ ಗುರುಕಿರಣ್, ಶರಣ್, ಚಿಕ್ಕಣ್ಣ ಮತ್ತು ತರುಣ್ ತಮ್ಮ ಸ್ನೇಹದ ಬಗ್ಗೆ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಕಾಲೆಳೆದುಕೊಂಡು ಮಸ್ತಿ ಮಾಡಿದ್ದಾರೆ.. ಶಿವಣ್ಣ ಅವರ ಇತ್ತೀಚೆಗೆ ಸದ್ದು ಮಾಡಿದ
 ‘ಟಗರು’ ಚಿತ್ರದಲ್ಲಿ ಡಾಲಿ ಮತ್ತು ಚಿಟ್ಟೆ ಪಾತ್ರದ ಮೂಲಕ ವಿಲನ್ಗಳಾಗಿ ಮಿಂಚಿರುವ ಧನಂಜಯ್ ಮತ್ತು ವಸಿಷ್ಠ ಸಿಂಹ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.  ಪಾತ್ರದ ಮೂಲಕವಷ್ಟೇ ಅಲ್ಲದೇ, ತಮ್ಮ ಕಂಠದಿಂದಲೂ ಪ್ರಸಿದ್ಧರಾಗಿರುವ ವಸಿಷ್ಠ ಸಿಂಹ ತಮ್ಮ ಬೇಸ್ವಾಯ್ಸ್ನಲ್ಲಿ ಹಾಡೊಂದನ್ನು ಹಾಡಿದ್ದಾರೆ.
‘ಟಗರು’ ಚಿತ್ರದ ಸೆಟ್ನಲ್ಲಾದ ಮಧುರ ಅನುಭವಗಳನ್ನು ಮೆಲುಕು ಹಾಕಿದ್ದಾರೆ. ನಟಿ ಮಾನ್ವಿತಾ ಕೂಡ ಈ ಖುಷಿಯಲ್ಲಿ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ.
'ಟಗರು' ಸಿನಿಮಾದ ದೊಡ್ಡ ಹೈಲೈಟ್ ಅಂದರೆ ಆ ಚಿತ್ರದಲ್ಲಿರುವ ಪಾತ್ರಗಳು. ಪಾತ್ರಗಳ ಹೆಸರು ಕೂಡ ವಿಭಿನ್ನವಾಗಿದ್ದು, ಟಗರು ಶಿವ, ಡಾಲಿ, ಚಿಟ್ಟೆ, ಕಾನ್ಸ್ ಟೇಬಲ್ ಸರೋಜ, ಕಾಕ್ರೋಚ್, ಪುನರ್ವಸು, ಅಂಕಲ್, ಪಂಚಮಿ ಹೀಗೆ ಪ್ರತಿ ಪಾತ್ರಗಳಿಗೂ ತನ್ನದೇ ಆದ ಮಹತ್ವವಿದೆ ಹಾಗೂ ಪ್ರೇಕ್ಷಕರಿಗೆ ಹತ್ತಿರವಾಗಿವೆ.

Play button

'ಟಗರು' ಫಿಲ್ಮ್ನಲ್ಲಿ ಚಿತ್ತರಂಜನ್ ಅಲಿಯಾಸ್ ಚಿಟ್ಟೆ ಪಾತ್ರ ಮಾಡಿದ್ದು ಯುವ ನಟ ವಸಿಷ್ಟ. ವಸಿಷ್ಟ ಈ ಪಾತ್ರದಲ್ಲಿ ಆವರಿಸಿಕೊಂಡು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಆದರೆ ಈ ಪಾತ್ರ ವಸಿಷ್ಟ ಅವರಿಗೆ ಈ ರೋಲ್ ಸ್ವಲ್ಪ ಚಿಕ್ಕದಾಯಿತೆನೋ ಪಾತ್ರ ಅಂತ ಅನಿಸಿತ್ತಂತೆ. ಈ ವಿಷಯವನ್ನು ಸ್ವತಃ ಅವರೇ ಶಿವಣ್ಣನ ಜೊತೆಗೆ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
 'ಟಗರು' ಸಿನಿಮಾದಲ್ಲಿ ನಿಮ್ಮ ಚಿಟ್ಟೆ ಪಾತ್ರ ತುಂಬ ಚಿಕ್ಕದಾಗಿತ್ತು ಎಂದು ಯಾವತ್ತಾದರೂ ಅನಿಸಿತ್ತಾ? ಎಂಬ ಶಿವಣ್ಣ ಪ್ರಶ್ನೆಗೆ ಉತ್ತರಿಸಿದ ವಸಿಷ್ಟ ''ಹೌದು. 'ಟಗರು' ಸಿನಿಮಾದಲ್ಲಿ ನಾನು ನಟನೆ ಮಾಡಿದ್ದ ಚಿಟ್ಟೆ ಪಾತ್ರ ಚಿಕ್ಕದು ಅನಿಸ್ತು.

   
ನೀವು ವಿಲನ್ ಆಗಿರುವ ಸಿನಿಮಾದಲ್ಲಿ ಯಾವ ನಟಿಯ ಐಟಂ ಸಾಂಗ್ ಇರಬೇಕು ಎಂಬ ಪ್ರಶ್ನೆಗೆ ವಸಿಷ್ಟ
''ಕನ್ನಡದಲ್ಲಾದರೆ ರಚಿತಾ ರಾಮ್, ಬಾಲಿವುಡ್ನಲ್ಲಾದರೆ ಫೇವರೇಟ್ ನಟಿ ಬಿಪಾಶ ಬಸು ಅವರ ಐಟಂ ಸಾಂಗ್ ಇರಬೇಕು. ಆಕಸ್ಮಾತ್ ರಚಿತಾ ರಾಮ್ ಐಟಂ ಸಾಂಗ್ ಮಾಡಲು  ಒಪ್ಪದಿದ್ದರೆ, ನಾನೇ ಖುದ್ದಾಗಿ ಒಪ್ಪಿಸುತ್ತೇನೆ.'' ಎಂದುತ್ತರಿಸಿದಾಗ ಈಡೀ ಸೆಟ್ನಲ್ಲಿ ನಗೆ ಉಕ್ಕಿತು..
'ಟಗರು' ಯಶಸ್ಸಿನ ನಂತರ ನಟ ಧನಂಜಯ್ ಶುಕ್ರದೆಸೆ ಆರಂಭವಾಗಿದೆ. ಡಾಲಿ ರೋಲ್ನಲ್ಲಿನ ಅದ್ಭುತ ನಟನೆಯಿಂದ  ಧನಂಜಯ್ ಎಲ್ಲರ ಹಾಟ್ ಫೇವರೇಟ್ ಆಗಿದ್ದಾರೆ.
ಡಾಲಿ ಪಾತ್ರಕ್ಕೆ ಹುಡುಗಿಯರು ಸಖತ್ ಫಿದಾ ಆಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಒಂದು ಹುಡುಗಿ ತನ್ನ ಭುಜದ ಮೇಲೆ ಡಾಲಿ ಎಂದು ಹಚ್ಚೆ  ಹಾಕಿಸಿಕೊಂಡಿದ್ದಾಳಂತೆ. ಧನಂಜಯ್ಗೆ ಮೊದಲಿನಿಂದ ದೊಡ್ಡ ಪ್ರಮಾಣದಲ್ಲಿ ಮಹಿಳಾ ಅಭಿಮಾನಿಗಳಿದ್ದಾರೆ. ಆದರೆ ಡಾಲಿ ಪಾತ್ರದ ನಂತರ ಅದು ಇನ್ನೂ ಹೆಚ್ಚಾಗಿದೆ.
ಸಾಕಷ್ಟು ಹುಡುಗಿಯರಿಗೆ ಧನಂಜಯ್ ಮೇಲೆ ಕ್ರಶ್ ಆಗಿದೆ. ಆದರೆ ಧನಂಜಯ್ಗೆ ಸಹ ಕನ್ನಡದ ಒಬ್ಬ ನಟಿ ಮೇಲೆ ಕ್ರಶ್ ಆಗಿತ್ತು.. ಹಾಗಾದರೆ ಆ ನಟಿ ಯಾರು ಎಂಬ ಪ್ರಶ್ನೆ ಮೂಡಿರಬಹುದು. 
ಕೃತಿಕಾ ಮೇಲೆ ಕ್ರಶ್
ನಟಿ ಕೃತಿಕಾ ಜಯಕುಮಾರ್ ಮೇಲೆ ನಟ ಧನಂಜಯ್ ಗೆ ಕ್ರಶ್ ಆಗಿತ್ತಂತೆ. 

ಶಿವಣ್ಣ ''ನೀವು ನಟಿಸಿದ 9 ಸಿನಿಮಾಗಳಲ್ಲಿ ಯಾವ ನಟಿಯ ಮೇಲಾದರೂ ಕ್ರಶ್ ಆಗಿತ್ತಾ?'' ಎಂದು ಪ್ರಶ್ನೆ ಕೇಳಿದರು. ಆಗ ಧನಂಜಯ್ ''ಹೌದು,'ಬಾಕ್ಸರ್' ಸಿನಿಮಾದಲ್ಲಿ ನನ್ನ ಜೊತೆಗೆ ನಟಿಸಿದ್ದ ಕೃತಿಕಾ ಜಯಕುಮಾರ್ ಮೇಲೆ ಆ ಟೈಂ ನಲ್ಲಿ ಕ್ರಶ್ ಆಗಿತ್ತು. ಆ ಚಿತ್ರದ ಸಂದರ್ಭದಲ್ಲಿ ಕ್ರಶ್ ಆಗಿತ್ತು. ಆಮೇಲೆ ಯಾಕೋ ಅವರು ತುಂಬ ಚಿಕ್ಕ ಹುಡುಗಿ ಅನಿಸಿತು. ನಾನು ಅವರನ್ನು ಮಾತೇ ಆಡಿಸ್ತಿರಲಿಲ್ಲ" ಎಂದು ಸಂಕೋಚದಿಂದಲೇ ಧನಂಜಯ್ ಉತ್ತರಿಸಿದರು. ಆಗ ಶಿವಣ್ಣ ''ಆಕೆ ತುಂಬ ಒಳ್ಳೆ ಹುಡುಗಿ. ಫೋನ್ ಮಾಡಿ ಇದನ್ನ ಕೇಳ್ತೀನಿ'' ಎಂದು ಕಾಲೆಳೆದರು.
ಸಿಂಗಲ್ ಆಗಿರುವ ಹುಡುಗರಿಗೆ ಒಂದು ಚಿಂತೆ ಇದ್ದರೆ, ಮದುವೆ ಆದವರಿಗೆ ಹಲವಾರು ಚಿಂತೆ,ಸಮಸ್ಯೆಗಳು ಇರುತ್ತವೆ. ಅದಕ್ಕೆ ಏನೋ ಮದುವೆ ಅಂದರೆ ಹುಡುಗರು ಸ್ವಲ್ಪ ಭಯ ಬೀಳ್ತಾರೆ.
ಇನ್ನು ಹುಡುಗರು ಬ್ಯಾಚುಲರ್ ಆಗಿದ್ದರೆ ಎಷ್ಟು ಅನುಕೂಲ ಇದೆ ಎನ್ನುವುದನ್ನು ನಟ ಧನಂಜಯ್ ಈ ರೀತಿ ಹೇಳ್ತಾರೆ.


''ಸಿಂಗಲ್ ಆಗಿದ್ದರೆ ಇರುವ ಮೂರು ಅನುಕೂಲಗಳನ್ನು ಹೇಳಿ ?'' ಎಂದು ಶಿವಣ್ಣ ಕೇಳಿದಾಗ ಧನಂಜಯ್ ಮೊದಲನೆಯದು ''ಆರಾಮಾಗಿ ಇರಬಹುದು. ಎಲ್ಲಿ ಇದ್ದೀನಿ ಏನ್ ಮಾಡುತ್ತಾ ಇದ್ದೀನಿ, ಅಂತ ಯಾವಾಗಲೂ ರಿಪೋರ್ಟ್ ಒಪ್ಪಿಸುವ ಅವಶ್ಯಕತೆ ಇರೋದಿಲ್ಲ. ಎರಡನೆಯದು ಆರಾಮಾಗಿ ಫ್ರೆಂಡ್ಸ್ ಜೊತೆಗೆ ಜಾಸ್ತಿ ಟೈಂ ಸ್ಪೆಂಡ್ ಮಾಡಬಹುದು. ಮೂರನೆಯದು ಯಾರಿಗೆ ಬೇಕಾದರು ಲೈನ್ ಹಾಕಬಹುದು.'' ಎಂದು ಸಿಂಗಲ್ ಆಗಿದ್ದರೆ ಇಷ್ಟೊಂದು ಅನುಕೂಲ ಇದೆ ಎಂದು ಉತ್ತರಿಸಿದರು.
ಇಂಥಹ ಮಸ್ತಿ, ಕಾಲೆಳೆತವನ್ನು ಸಂಪೂರ್ಣವಾಗಿ ವೀಕ್ಷಿಸಲು ಇಡೀ ಎಪಿಸೋಡ್ ನೀವು ನೋಡ್ಬೇಕು.